Hebrews 11

ನಂಬಿಕೆಯ ಮಹತ್ವಕ್ಕೆ ದೃಷ್ಟಾಂತಗಳು

1ನಂಬಿಕೆಯೋ ನಾವು
11:1 ಅಥವಾ. ನಿರೀಕ್ಷಿಸುವವುಗಳ ಆಧಾರವೂ, ಕಣ್ಣಿಗೆ ಕಾಣದೆ ಇರುವವುಗಳ ಪ್ರಮಾಣವೂ ಆಗಿದೆ. ರೋಮಾ.
ನಿರೀಕ್ಷಿಸುವಂಥವುಗಳು ಭರವಸೆಯೂ, ಇನ್ನೂ ಕಣ್ಣಿಗೆ ಕಾಣದವುಗಳ ಮೇಲಿನ ನಿಶ್ಚಯವೂ ಆಗಿದೆ.
2ನಮ್ಮ ಹಿರಿಯರು ತಮ್ಮ ನಂಬಿಕೆಯಿಂದಲೇ
11:2 ಅಥವಾ, ಅನುಮತಿ, ಪ್ರಶಂಸಿಸು, ತೋರಿಸಿತು ಇತ್ಯಾದಿ.
ದೈವಸಮ್ಮತಿಯನ್ನು ಪಡೆದರು.
3
11:3 ಆದಿ. 1:1:
ವಿಶ್ವವು ದೇವರ ಮಾತಿನಿಂದಲೇ ನಿರ್ಮಿತವಾಯಿತೆಂದು ನಾವು ನಂಬಿಕೆಯಿಂದಲೇ ತಿಳಿದುಕೊಂಡಿದ್ದೇವೆ. ಈ ಕಾರಣದಿಂದ ಕಾಣಿಸುವ ಈ ಜಗತ್ತು ದೃಶ್ಯವಸ್ತುಗಳಿಂದ ಉಂಟಾಗಲಿಲ್ಲವೆಂದು ಗ್ರಹಿಸುತ್ತೇವೆ.

4ನಂಬಿಕೆಯಿಂದಲೇ
11:4 ಆದಿ. 4:4-8; 1 ಯೋಹಾ. 3:12:
ಹೇಬೆಲನು ಕಾಯಿನನ ಯಜ್ಞಕ್ಕಿಂತ
11:4 ಜ್ಞಾ. 15:8:
ಶ್ರೇಷ್ಠ ಯಜ್ಞವನ್ನು ದೇವರಿಗೆ ಸಮರ್ಪಿಸಿದನು. ಇದರ ಮೂಲಕ ಅವನು ನೀತಿವಂತನೆಂದು ಸಾಕ್ಷಿ ಹೊಂದಿದನು. ದೇವರು ಅವನ ಕಾಣಿಕೆಗಳನ್ನು ಕುರಿತು ಪ್ರಶಂಸಿಸಿದನು.
11:4 ಆದಿ. 4:10; ಇಬ್ರಿ. 12:24:
ಅವನು ಸತ್ತುಹೋಗಿದ್ದರೂ, ಅವನ ನಂಬಿಕೆಯ ಮೂಲಕ ಇನ್ನೂ ಮಾತನಾಡುವವನಾಗಿದ್ದಾನೆ.

5ನಂಬಿಕೆಯಿಂದಲೇ
11:5 ಆದಿ. 5:22-24:
ಹನೋಕನು ಮರಣವನ್ನು ಅನುಭವಿಸದೇ ಒಯ್ಯಲ್ಪಟ್ಟನು. ದೇವರು ಅವನನ್ನು ತೆಗೆದುಕೊಂಡು ಹೋದದ್ದರಿಂದ ಅವನು ಯಾರಿಗೂ ಕಾಣಿಸಿಗಲಿಲ್ಲ. ಅವನು ಒಯ್ಯಲ್ಪಡುವುದಕ್ಕಿಂತ ಮೊದಲು ದೇವರನ್ನು ಮೆಚ್ಚಿಸುವವನಾಗಿದ್ದನೆಂದು ಸಾಕ್ಷಿ ಹೊಂದಿದನು.
6ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವುದು ಅಸಾಧ್ಯ. ಏಕೆಂದರೆ ದೇವರ ಬಳಿಗೆ ಬರುವವನು
11:6 1 ಪೂರ್ವ. 28:9; ಯೆರೆ. 29:12-14; ಯೋಹಾ 4:24:
ದೇವರು ಇದ್ದಾನೆ ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬಬೇಕು.

7ನಂಬಿಕೆಯಿಂದಲೇ
11:7 ಆದಿ. 6:13-22; ಲೂಕ. 17:26; 1 ಪೇತ್ರ. 3:20:
ನೋಹನು ಇನ್ನೂ ಕಾಣದಿದ್ದವುಗಳ ವಿಷಯವಾಗಿ ದೇವರಿಂದ ದೈವೋಕ್ತಿಯನ್ನು ಹೊಂದಿ, ಭಯಭಕ್ತಿಯುಳ್ಳವನಾಗಿ ತನ್ನ ಮನೆಯವರ ಸಂರಕ್ಷಣೆಗೋಸ್ಕರ ನಾವೆಯನ್ನು ಕಟ್ಟಿ ಸಿದ್ಧಮಾಡಿದನು. ನಂಬಿಕೆಯಿಂದಲೇ ಅವನು ಲೋಕದವರು ದಂಡನೆಗೆ ಪಾತ್ರರೆಂದು ನಿರ್ಣಯಿಸಿಕೊಂಡನು. ಆದುದ್ದರಿಂದ
11:7 ರೋಮಾ. 4:13; ಆದಿ. 6:9; ಯೆಹೆ. 14:14, 20:
ನಂಬಿಕೆಯ ಫಲವಾದ ನೀತಿಗೆ ಬಾಧ್ಯನಾದನು.

8ನಂಬಿಕೆಯಿಂದಲೇ
11:8 ಆದಿ. 12:1-4; ಅ. ಕೃ. 7:2-4:
ಅಬ್ರಹಾಮನು ಕರೆಯಲ್ಪಟ್ಟಾಗ ವಿಧೇಯನಾಗಿ
11:8 ಆದಿ. 12:7:
ತಾನು ಬಾಧ್ಯವಾಗಿ ಹೊಂದಬೇಕಾಗಿದ್ದ ಸ್ಥಳಕ್ಕೆ ಹೊರಟು ಹೋದನು. ತಾನು ಹೋಗುವುದು ಎಲ್ಲಿಗೆ ಎಂದು ತಿಳಿಯದೆ ಹೊರಟನು.
9ನಂಬಿಕೆಯಿಂದಲೇ ಅವನು ವಾಗ್ದಾನದ ದೇಶಕ್ಕೆ ಬಂದಾಗ, ಅಲ್ಲಿ ಅನ್ಯ ದೇಶದವನಂತೆ
11:9 ಆದಿ. 12:8; 13:3, 18; 18:1, 9:
ಗುಡಾರಗಳಲ್ಲಿ ಇದ್ದುಕೊಂಡು ಪ್ರವಾಸಿಯಾಗಿ ಬದುಕಿದನು. ಅದೇ ವಾಗ್ದಾನಕ್ಕೆ ಸಹಭಾಧ್ಯರಾಗಿದ್ದ ಇಸಾಕನೂ, ಯಾಕೋಬನೂ ಅವನಂತೆಯೇ ಗುಡಾರಗಳಲ್ಲಿ ವಾಸಿಸಿದರು.
10ಯಾಕೆಂದರೆ ಅವನು
11:10 ಕೀರ್ತ. 87:1; ಪ್ರಕ. 21:14:
ಶಾಶ್ವತವಾದ ಅಸ್ತಿವಾರಗಳುಳ್ಳ ಪಟ್ಟಣವನ್ನು ಅಂದರೆ
11:10 ಪ್ರಕ. 21:2, 10:
ದೇವರು ಸಂಕಲ್ಪಿಸಿ ನಿರ್ಮಿಸಿದ ಪಟ್ಟಣವನ್ನು ಎದುರುನೋಡುತ್ತಿದ್ದನು.

11ಇದಲ್ಲದೆ
11:11 ಆದಿ. 17:19; 18:11-14; 21:2:
ಸಾರಳು
11:11 ಇಬ್ರಿ. 10:23:
ವಾಗ್ದಾನ ಮಾಡಿದಾತನನ್ನು ನಂಬತಕ್ಕವನೆಂದೆಣಿಸಿ ತಾನು ಪ್ರಾಯ ಮೀರಿದವಳಾಗಿದ್ದರೂ ನಂಬಿಕೆಯಿಂದಲೇ ಗರ್ಭವತಿಯಾಗುವುದಕ್ಕೆ ಶಕ್ತಿಯನ್ನು ಹೊಂದಿದಳು.
12ಆದುದರಿಂದ
11:12 ರೋಮಾ. 4:19:
ಮೃತಪ್ರಾಯನಾಗಿದ್ದ ಒಬ್ಬನಿಂದ
11:12 ಆದಿ. 15:5; 22:17; 32:12:
ಆಕಾಶದ ನಕ್ಷತ್ರಗಳಂತೆಯೂ ಸಮುದ್ರ ತೀರದಲ್ಲಿರುವ ಮರಳಿನಂತೆಯೂ ಅಸಂಖ್ಯವಾದ ಮಕ್ಕಳು ಹುಟ್ಟಿದರು.

13
11:13 ವ. 39:
ಇವರೆಲ್ಲರು ವಾಗ್ದಾನಗಳ ಫಲವನ್ನು ಹೊಂದಲಿಲ್ಲ. ಆದರೂ
11:13 ವ. 27; ಯೋಹಾ 8:56; ಮತ್ತಾ 13:17:
ಅವುಗಳನ್ನು ದೂರದಿಂದ ನೋಡಿ ಮತ್ತು ಉಲ್ಲಾಸದೊಡನೆ ಸ್ವೀಕರಿಸಿ ನಂಬಿಕೆಯುಳ್ಳವರಾಗಿ ಮೃತರಾದರು. ತಾವು ಭೂಮಿಯ ಮೇಲೆ
11:13 ಎಫೆ. 2:19:
ಪರದೇಶದವರೂ ಪ್ರವಾಸಿಗಳು ಆಗಿದ್ದೆವೆಂದು
11:13 ಆದಿ. 23:4; 47:9. 1 ಪೂರ್ವ. 29:15; ಕೀರ್ತ. 39:12:
ಒಪ್ಪಿಕೊಂಡರು.
14ಇಂಥ ಮಾತುಗಳನ್ನಾಡುವವರು ತಾವು ಸ್ವದೇಶವನ್ನು ಹುಡುಕುವವರಾಗಿದ್ದರೆಂಬುದನ್ನು ವ್ಯಕ್ತಪಡಿಸುತ್ತದೆ.

15
11:15 ಆದಿ. 24:6-8.
ತಾವು ಬಿಟ್ಟು ಬಂದ ದೇಶದ ಮೇಲೆ ಮನಸ್ಸಿಟ್ಟವರಾಗಿದ್ದರೆ ಅಲ್ಲಿಗೆ ಹಿಂದಿರುಗಿ ಹೋಗುವ ಅವಕಾಶಗಳು ಅವರಿಗಿದ್ದವು.
16ಆದರೆ ಅವರು ಪರಲೋಕವೆಂಬ ಉತ್ತಮ ದೇಶವನ್ನು ಹಾರೈಸುವವರು. ಆದ್ದರಿಂದ
11:16 ಆದಿ. 28:13; ವಿಮೋ. 3:6; 4:5.
ದೇವರು ಅವರ ದೇವರೇ ಎನ್ನಿಸಿಕೊಳ್ಳುವುದಕ್ಕೆ ನಾಚಿಕೆಗೊಳ್ಳದೇ,
11:16 ಕೀರ್ತ. 107:36; ಮತ್ತಾ 25:34; ಯೋಹಾ. 14:2; ಇಬ್ರಿ. 11:10:
ಅವರಿಗೋಸ್ಕರ ಪಟ್ಟಣವನ್ನು ಸಿದ್ಧಮಾಡಿದ್ದಾನೆ.

17
This verse is empty because in this translation its contents have been moved to form part of verse Heb 11:18.
In this translation, this verse contains text which in some other translations appears in verses Heb 11:17-Heb 11:18.
18
11:17 ಆದಿ. 22:1-10; ಯಾಕೋಬ. 2:21:
ಅಬ್ರಹಾಮನು ಪರೀಕ್ಷಿಸಲ್ಪಟ್ಟಾಗ ಇಸಾಕನನ್ನು ನಂಬಿಕೆಯಿಂದಲೇ ಸಮರ್ಪಿಸಿದನು. ಆ ವಾಗ್ದಾನಗಳನ್ನು ಹೊಂದಿದ ಅವನು,
11:18 ಆದಿ. 21:12; ರೋಮಾ. 9:7:
<<ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಅನ್ನಿಸಿಕೊಳ್ಳುವರು>> ಎಂದು ದೇವರು ಅವನಿಗೆ ಹೇಳಿದ್ದರೂ ತನ್ನ ಏಕಪುತ್ರನನ್ನು ಅರ್ಪಿಸಿದನು.
19
11:19 ರೋಮಾ. 4:17-21:
ನನ್ನ ಮಗನು ಸತ್ತರೂ ದೇವರು ಅವನನ್ನು ಬದುಕಿಸಲು ಸಮರ್ಥನಾಗಿದ್ದಾನೆಂದು ತಿಳಿದುಕೊಂಡಿದ್ದನು. ಮತ್ತು
11:19 ಮೂಲ. ಸತ್ತವರೊಳಗಿಂದ ಸಾಮ್ಯರೂಪವಾಗಿ ಅವನನ್ನು ಹೊಂದಿದನು.
ಸತ್ತವರೊಳಗಿಂದಲೇ ಜೀವಿತನಾಗಿ ಬಂದವನಂತೆ ಅವನನ್ನು ಪಡೆದುಕೊಂಡನು.

20ನಂಬಿಕೆಯಿಂದಲೇ
11:20 ಆದಿ. 27:27-29, 39, 40.
ಇಸಾಕನು ಯಾಕೋಬನನ್ನು ಮತ್ತು ಏಸಾವನನ್ನು ಆಶೀರ್ವದಿಸಿದಾಗ ಮುಂದೆ ಸಂಭವಿಸಬಹುದಾದ ವಿಷಯಗಳನ್ನು ಸೂಚಿಸಿದನು.
21
11:21 ಆದಿ. 48:16, 20:
ಯಾಕೋಬನು ತಾನು ಮರಣ ಹೊಂದುವ ಸಮಯದಲ್ಲಿ ನಂಬಿಕೆಯಿಂದಲೇ ಯೋಸೇಫನ ಮಕ್ಕಳಿಬ್ಬರನ್ನು ಆಶೀರ್ವದಿಸಿದನು.
11:21 ಆದಿ. 47:31:
ತನ್ನ ಕೋಲಿನ ಮೇಲೆ ಒರಗಿಕೊಂಡು ದೇವರನ್ನು ಆರಾಧಿಸಿದನು.
22
11:22 ಆದಿ. 50. 24, 25; ವಿಮೋ. 13:19:
ಯೋಸೇಫನು ತನ್ನ ಮರಣ ಸಮಯದಲ್ಲಿ ಇಸ್ರಾಯೇಲ್ಯರು ಐಗುಪ್ತದೇಶದಿಂದ ಹೊರಡುವುದನ್ನು ಕುರಿತು ನಂಬಿಕೆಯಿಂದಲೇ ಮಾತನಾಡಿ ತನ್ನ ಎಲುಬುಗಳನ್ನು ತೆಗೆದುಕೊಂಡು ಹೋಗುವ ವಿಷಯದಲ್ಲಿ ಅಪ್ಪಣೆ ಕೊಟ್ಟನು.

23
11:23 ವಿಮೋ. 2:2, 3; ಅ. ಕೃ. 7:20:
ಮೋಶೆ ಹುಟ್ಟಿದಾಗ ಅವನ ತಂದೆತಾಯಿಗಳು ಕೂಸು ಸುಂದರವಾಗಿದೆ ಎಂದು ನೋಡಿ
11:23 ವಿಮೋ. 1:16, 22:
ಅರಸನ ಅಪ್ಪಣೆಗೆ ಭಯಪಡದೇ ನಂಬಿಕೆಯಿಂದಲೇ ಅವನನ್ನು ಮೂರು ತಿಂಗಳು ಬಚ್ಚಿಟ್ಟರು.
24ನಂಬಿಕೆಯಿಂದಲೇ ಮೋಶೆಯು ದೊಡ್ಡವನಾದ ಮೇಲೆ
11:24 ವಿಮೋ. 2:10, 11:
ಫರೋಹನ ಪುತ್ರಿಯ ಮಗನೆನಿಸಿಕೊಳ್ಳುವುದು ಬೇಡವೆಂದುಕೊಂಡನು.
25
11:25 1 ಯೋಹಾ. 2:17:
ಸ್ವಲ್ಪ ಕಾಲದಲ್ಲಿ ಗತಿಸಿ ಹೋಗುವ ಪಾಪಭೋಗಗಳನ್ನು ಅನುಭವಿಸುವುದಕ್ಕಿಂತ,
11:25 ಕೀರ್ತ. 84:10:
ದೇವಜನರೊಂದಿಗೆ ಕಷ್ಟವನ್ನು ಅನುಭವಿಸುವುದೇ ಮೇಲೆಂದು ತೀರ್ಮಾನಿಸಿಕೊಂಡನು.
26ಐಗುಪ್ತದೇಶದ ಸರ್ವಐಶ್ವರ್ಯಕ್ಕಿಂತಲೂ,
11:26 ಇಬ್ರಿ. 13:13; ಕೀರ್ತ. 69:9; 89:50, 51; ಫಿಲಿ. 3:7, 8; 1 ಪೇತ್ರ. 4:14:
ಕ್ರಿಸ್ತನ ನಿಮಿತ್ತವಾಗಿ ಉಂಟಾಗುವ ನಿಂದೆಯೇ ಶ್ರೇಷ್ಠ ಭಾಗ್ಯವೆಂದೆಣಿಸಿಕೊಂಡನು. ಏಕೆಂದರೆ
11:26 ಇಬ್ರಿ. 2:2; 10:35:
ಮುಂಬರುವ ಪ್ರತಿಫಲದ ಮೇಲೆ ಕಣ್ಣಿಟ್ಟಿದ್ದನು.

27ನಂಬಿಕೆಯಿಂದಲೇ
11:27 ವಿಮೋ. 10:28, 29; 12:37; 13:17, 18:
ಅವನು ಅರಸನ ರೌದ್ರಕ್ಕೆ ಭಯಪಡದೇ ಐಗುಪ್ತದೇಶವನ್ನು ಬಿಟ್ಟುಹೋದನು. ಏಕೆಂದರೆ ಅವನು
11:27 ವ. 13; 1 ತಿಮೊ. 1:17:
ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನಂತೆ ದೃಢಚಿತ್ತನಾಗಿದ್ದನು.
28ಚೊಚ್ಚಲ ಮಕ್ಕಳನ್ನು ಸಂಹರಿಸುವವನು, ಇಸ್ರಾಯೇಲ್ಯರ ಚೊಚ್ಚಲ ಮಕ್ಕಳನ್ನು ಮುಟ್ಟದಂತೆ, ನಂಬಿಕೆಯಿಂದಲೇ
11:28 ವಿಮೋ. 12:21-30.
ಅವನು ಪಸ್ಕವನ್ನೂ ರಕ್ತಪೋಕ್ಷಣಾಚಾರವನ್ನೂ ಆಚರಿಸಿದನು.

29
11:29 ವಿಮೋ. 14:21-30.
ಇಸ್ರಾಯೇಲ್ಯರು ನಂಬಿಕೆಯಿಂದಲೇ ಕೆಂಪು ಸಮುದ್ರವನ್ನು ಒಣ ಭೂಮಿಯನ್ನು ದಾಟುವಂತೆ ದಾಟಿದರು. ಐಗುಪ್ತದೇಶದವರು ಅದನ್ನು ದಾಟುವುದಕ್ಕೆ ಪ್ರಯತ್ನಿಸಿದಾಗ ಮುಳುಗಿ ಹೋದರು.
30ನಂಬಿಕೆಯಿಂದಲೇ
11:30 ಯೆಹೋ. 6:15, 16, 20:
ಅವರು ಏಳು ದಿನಗಳ ತನಕ ಯೆರಿಕೋ ಪಟ್ಟಣದ ಗೋಡೆಗಳನ್ನು ಸುತ್ತಿದ ಮೇಲೆ ಅವು ಬಿದ್ದವು.
31ನಂಬಿಕೆಯಿಂದಲೇ
11:31 ಯೆಹೋ. 6:25; ಯಾಕೋಬ. 2:25:
ರಾಹಾಬಳೆಂಬ ಸೂಳೆಯು
11:31 ಯೆಹೋ. 2:1, 8-13:
ಗೂಢಚಾರರನ್ನು ಸಮಾಧಾನವಾಗಿ ಸೇರಿಸಿಕೊಂಡು, ಅವಿಧೇಯರೊಂದಿಗೆ ನಾಶವಾಗದೆ ಉಳಿದಳು.

32ಇನ್ನೂ ಏನು ಹೇಳಬೇಕು?
11:32 ನ್ಯಾಯ. 6:11:
ಗಿದ್ಯೋನ್,
11:32 ನ್ಯಾಯ. 4:6:
ಬಾರಾಕ
11:32 ನ್ಯಾಯ. 13:24:
ಸಂಸೋನ,
11:32 ನ್ಯಾಯ. 11:1:
ಯೆಪ್ತಾಹ,
11:32 1 ಸಮು. 16:1, 13:
ದಾವೀದ,
11:32 1 ಸಮು. 1:20:
ಸಮುವೇಲ ಮತ್ತು ಪ್ರವಾದಿಗಳ ವಿಷಯವಾಗಿ ಹೇಳಬೇಕಾದರೆ ನನಗೆ ಸಮಯ ಸಾಲದು.
33ನಂಬಿಕೆಯ ಮೂಲಕ ಅವರು ರಾಜ್ಯಗಳನ್ನೂ ಸ್ವಾಧೀನ ಮಾಡಿಕೊಂಡರು, ನೀತಿಯನ್ನು ಸ್ಥಾಪಿಸಿದರು, ವಾಗ್ದಾನಗಳನ್ನು ಪಡೆದುಕೊಂಡರು,
11:33 ನ್ಯಾಯ. 14:6; 1 ಸಮು. 17:35; ದಾನಿ. 6:22:
ಸಿಂಹಗಳ ಬಾಯಿ ಕಟ್ಟಿದರು.,
34
11:34 ದಾನಿ. 3:25, 26:
ಬೆಂಕಿಯ ಶಕ್ತಿಯನ್ನು ನಂದಿಸಿದರು, ಕತ್ತಿಯ ಬಾಯಿಂದ ತಪ್ಪಿಸಿಕೊಂಡರು, ದುರ್ಬಲರಾಗಿದ್ದು ಬಲಿಷ್ಠರಾದರು, ಯುದ್ಧದಲ್ಲಿ ಪರಾಕ್ರಮಶಾಲಿಗಳಾದರು,
11:34 ನ್ಯಾಯ. 7:21; 1 ಸಮು. 17:51:
ಪರದೇಶದವರ ಸೈನ್ಯಗಳನ್ನು ಓಡಿಸಿಬಿಟ್ಟರು.

35
11:35 1 ಅರಸು. 17:22; 2 ಅರಸು. 4:35:
ಸ್ತ್ರೀಯರು ಸತ್ತುಹೋಗಿದ್ದ ತಮ್ಮವರನ್ನು ಜೀವದಿಂದ ತಿರುಗಿ ಪಡೆದುಕೊಂಡರು. ಕೆಲವರು ತಾವು ಯಾತನೆ ಹೊಂದುತ್ತಿರುವಾಗ ಶ್ರೇಷ್ಠ ಪುನರುತ್ಥಾನವನ್ನು ಹೊಂದುವುದಕ್ಕೋಸ್ಕರ, ಬಿಡುಗಡೆಯನ್ನು ತಿರಸ್ಕರಿಸಿದರು.
36ಬೇರೆ ಕೆಲವರು ಅಪಹಾಸ್ಯ, ಕೊರಡೆಯ ಪೆಟ್ಟು,
11:36 ಆದಿ. 39:20; ಯೆರೆ. 20:2; 37:15:
ಬೇಡಿ, ಸೆರೆಮನೆವಾಸಗಳನ್ನು ಅನುಭವಿಸಿದರು.
37
11:37 1 ಅರಸು. 21:13; 2 ಪೂರ್ವ. 24:21:
ಕೆಲವರನ್ನು ಜನರು ಕಲ್ಲೆಸೆದು ಕೊಂದರು,
11:37 1 ಅರಸು. 19:10; ಯೆರೆ. 26:23:
ಕೆಲವರನ್ನು ಗರಗಸದಿಂದ ಎರಡು ಭಾಗವಾಗಿ ಕೊಯ್ದು ಕೊಂದರು, ಕೆಲವರನ್ನು ಕತ್ತಿಯಿಂದ ಕೊಂದರು. ಕೆಲವರು ಕೊರತೆ, ಹಿಂಸೆ, ಬಾಧೆ ಇವುಗಳನ್ನು ಅನುಭವಿಸುವವರಾಗಿದ್ದು
11:37 2 ಅರಸು. 1:8:
ಕುರಿ ಮೇಕೆಗಳ ಚರ್ಮಗಳನ್ನು ಉಟ್ಟುಕೊಂಡವರಾಗಿ ಅಲೆದಾಡಿದರು.
38ಇಂಥವರಿಗೆ ಈ ಲೋಕವು ಯೋಗ್ಯಸ್ಥಳವಾಗಿರಲಿಲ್ಲ. ಅವರು ತಮ್ಮ ದೇಶದ
11:38 1 ಸಮು. 22:1; 1 ಅರಸು. 18:4; 19:9:
ಮರುಭೂಮಿ, ಬೆಟ್ಟ, ಗವಿ, ಕುಣಿಗಳಲ್ಲಿ ಅಲೆಯುವವರಾಗಿದ್ದರು.

39ಇವರೆಲ್ಲರು ತಮ್ಮ ನಂಬಿಕೆಯ ಮೂಲಕ ಒಳ್ಳೆ ಸಾಕ್ಷಿಯನ್ನು ಹೊಂದಿದವರಾಗಿದ್ದರೂ,
11:39 ಇಬ್ರಿ. 11:13; 1 ಪೇತ್ರ. 1:12:
ವಾಗ್ದಾನದ ಫಲವನ್ನು ಹೊಂದಲಿಲ್ಲ.
ದೇವರು ನಮಗೋಸ್ಕರ ಶ್ರೇಷ್ಠವಾದ ಭಾಗ್ಯವನ್ನು ಏರ್ಪಡಿಸಿ,
11:40 ಪ್ರಕ. 6:11:
ನಾವಿಲ್ಲದೆ ಅವರು ಪರಿಪೂರ್ಣರಾಗಬಾರದೆಂದು ಸಂಕಲ್ಪಿಸಿದನು.

40

Copyright information for KanULB